ಔಷಧ ನಿಯಂತ್ರಣ ಇಲಾಖೆ

ಕರ್ನಾಟಕ ಸರ್ಕಾರ

Back
ಔಷಧ ನಿಯಂತ್ರಕರು

Home

ಔಷಧ ನಿಯಂತ್ರಣ ಇಲಾಖೆಯಲ್ಲಿ ವಿವಿಧ ತಯಾರಕರು ಮತ್ತು ವಿತರಕರಿಂದ ಸ್ಪೂರಿಯಸ್/ಕಲಬೆರಕೆ/ನಕಲಿ/ಅನುತ್ತಮ ಗುಣಮಟ್ಟದ ಔಷಧಗಳು, ಅಧಿಕ ಬೆಲೆಗೆ ಮಾರುವ ಔಷಧಗಳ, ತಪ್ಪು ದಾರಿಗೆಳೆಯುವ ಜಾಹೀರಾತುಗಳು ಮತ್ತು ಮಾದಕ ದ್ರವ್ಯಗಳ ಬಗ್ಗೆ ಒಡ್ಡಿರುವ ಅಗಾಧ ಸವಾಲುಗಳನ್ನು ನಾವು ಗುರುತಿಸಿ ಎದುರಿಸುತ್ತೇವೆ. ಔಷಧ ನಿಯಂತ್ರಣ ಇಲಾಖೆಯಲ್ಲಿ ಸವಾಲುಗಳನ್ನು ಪೂರೈಸಲು ಸಜ್ಜುಗೊಂಡಿದ್ದೇವೆ. ಶಾಸನಬದ್ಧ ಅಂಗದಂತೆ, ನಾವು ಆರೋಗ್ಯ ಸೇವೆಯ ನಿಯಮಗಳಿಗೆ ಬೆಂಬಲ ನೀಡುವಲ್ಲಿ ಅವಿಭಾಜ್ಯ ಪಾತ್ರವನ್ನು ವಹಿಸುತ್ತೇವೆ. ನಮ್ಮ ಸಮುದಾಯಕ್ಕೆ ಗುಣಮಟ್ಟದ ಔಷಧಿಗಳು/ಸೌಂದರ್ಯವರ್ಧಕಗಳ ಲಭ್ಯತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನ್ಯಾಯಯುತವಾಗಿ ಕರ್ತವ್ಯವನ್ನು ನಿರ್ವಹಿಸುತ್ತೇವೆ.

ಗುಣಮಟ್ಟ, ಸುರಕ್ಷತೆ, ಫಲದಾಯಕತೆ ಮತ್ತು ನಿಯಂತ್ರಿತ ಬೆಲೆಯಲ್ಲಿ ಔಷಧಿಗಳ ತರ್ಕಬದ್ಧ ಬಳಕೆ, ರಕ್ತ ಮತ್ತು ರಕ್ತದ ಉತ್ಪನ್ನಗಳ ಸಂಗ್ರಹಣೆ ಮತ್ತು ಪೂರೈಕೆಯ ನಿರ್ವಹಣೆ, ತಪ್ಪುದಾರೆಗೆಳೆಯುವ ಜಾಹೀರಾತುಗಳ ಪರಿಶೀಲನೆ ಮತ್ತು ಅಶಿಸ್ತಿನ ಜನರ ಹಿತಾಸಕ್ತಿಗಳನ್ನು ಕಾಪಾಡುವುದು ಇಲಾಖೆಯ ಜವಾಬ್ದಾರಿಯಾಗಿದೆ. ಔಷಧಗಳ ಗುಣಮಟ್ಟವನ್ನು ಖಚಿತಪಡಿಸುವ ಸಲುವಾಗಿ ಇಲಾಖೆಯ ಅಧಿಕಾರಿಗಳು ಪರೀಕ್ಷೆ ಅಥವಾ ವಿಶ್ಲೇಷಣೆಯ ಉದ್ದೇಶದಿಂದ ಔಷಧ ಮತ್ತು ಕಾಂತಿವರ್ಧಕಗಳ ಮಾದರಿಗಳನ್ನು ಪಡೆಯುತ್ತಾರೆ. ಔಷಧಗಳ ವಿಶ್ಲೇಷಣೆಗಾಗಿ ಇಲಾಖೆಯು ಸುಸಜ್ಜಿತಗೊಂಡಿರುವ ಶಾಸನಬದ್ಧ ಪ್ರಯೋಗಶಾಲೆಗಳನ್ನು ಹೊಂದಿದೆ.

ಇಲಾಖೆಯು ಕರ್ತವ್ಯ ಬಲಕ್ಕೆ ಮೀಸಲಾದ, ಕೌಶಲ್ಯ, ಜ್ಞಾನ ಮತ್ತು ವೃತ್ತಿಪರ ಸಮಗ್ರತೆಗಾಗಿ ಪರಿಚಿತರಾಗಿರುವ ಮಾನವ ಶಕ್ತಿಯನ್ನು ಹೊಂದಿದೆ. ಸೇವೆಯಲ್ಲಿ ಈ ನಿರಂತರತೆಯೊಂದಿಗೆ ಸಮಾನಾಂತರವಾಗಿ ನಾವು ಬದಲಾವಣೆಯನ್ನು ಪ್ರತಿನಿಧಿಸುತ್ತೇವೆ. ವೃತ್ತಿಪರತೆ ಮತ್ತು ಪ್ರಕ್ರಿಯೆಗಳ ಬಗ್ಗೆ ನಾವು ಜನರನ್ನು ಹೇಗೆ ತಲುಪುತ್ತೇವೆ ಎಂಬುದನ್ನು ತಿಳಿದುಕೊಳ್ಳಲು ಇನ್ನಷ್ಟು ಅಧ್ಯಾಯಗಳನ್ನು ಪರಿಚಯಿಸಲು ನಾನು ನಿಮ್ಮನ್ನು ಆಹ್ವಾನಿಸುತ್ತೇನೆ. ಇಂದಿನ ಸುರಕ್ಷತೆ ಮತ್ತು ಉತ್ತಮ ನಾಳೆಯನ್ನು ನಿರ್ಮಿಸುವ ಅಗತ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ನಾನು ಕರ್ತವ್ಯ ನಿರ್ವಹಿಸುತ್ತೇನೆ.

×
ABOUT DULT ORGANISATIONAL STRUCTURE PROJECTS